ಕ್ರೇಪ್ - ಡಿ - ಷನ್	
ಸಾದಾ ನೇಯ್ಗೆಯಿರುವ ಹಾಗೂ ಚಿತ್ರಿತ ಅಥವಾ ಮುದ್ರಿತ ಮತ್ತು ಅತಿ ನುಣುಪಾದ ಒಂದು ವಿಧವಾದ ಕ್ರೇಪ್. ಬಹು ಹಸನಾದ ರೇಷ್ಮೆಯ ಹಾಸು ದಾರ ಮತ್ತು ಬಿಗಿಯಾಗಿ ಹುರಿ ಮಾಡಿದ ಉರ್ಸ್ಟೆಡ್ ಉಣ್ಣೆ ಹೊಕ್ಕಿನಿಂದ ಇದನ್ನು ತಯಾರಿಸಲಾಗುವುದು. ವಸ್ತ್ರಕ್ಕೆ ಪೂರ್ಣೀಕರಣವನ್ನು ಒದಗಿಸಿದ ಬಳಿಕ ಅದಕ್ಕೆ ಮುದುರಿದಂಥ ಹೊರಮೈ ಉಂಟಾಗುತ್ತದೆ. ಹೊಕ್ಕನ್ನು ಹಾಸಿನ ವ್ಯತಿರಿಕ್ತದೆಸೆಯಲ್ಲಿ ಹುರಿ ಮಾಡಿರುತ್ತಾರೆ. ಬಿಗಿಯಾಗಿ ಹುರಿ ಮಾಡಿದ ಹಾಸು ಮತ್ತು ಹೊಕ್ಕುಗಳಲ್ಲಿ ಎರಡು ಹೊಕ್ಕು ದಾರಗಳು ಎಡ ಹುರಿಯವು ಮತ್ತು ಎರಡು ಬಲ ಹುರಿಯವು ಇರುವಂತೆ ಕೆಲವು ಕ್ರೇಪ್-ಡಿ-ಷನ್ ಬಟ್ಟೆಗಳನ್ನು, ಏರ್ಪಡಿಸಿರುತ್ತಾರೆ. ಸಾದಾ ನೇಯ್ಗೆಯಲ್ಲಿ ಹಸನಾದ ಮತ್ತು ನವಿರಾದ ರೇಷ್ಮೆ ಬಟ್ಟೆಗಳೂ ಈ ಗುಂಪಿಗೆ ಸೇರಿದ ವಸ್ತ್ರಗಳು.			(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ